Cauvery Excellence PU College Embraces Digital Learning!
Taking a progressive step towards modern education, Cauvery Excellence PU College inaugurated its Digital Classroom, strengthening its commitment to technology-enabled teaching and smarter learning.
The digital classroom was inaugurated by Hon’ble MLA Shri G.T. Devegowda, who interacted with students and appreciated the initiative, encouraging them to make the best use of technology in their academic journey.
The introduction of digital classroom teaching at Cauvery Excellence PU College is a step towards making lessons more interactive, engaging, visual, and effective—enabling students to understand concepts better and experience a more dynamic learning environment.
Chairman Dr. G.R. Chandrashekar and Managing Director Dr. Sarala Chandrashekar were present on the occasion.
At Cauvery Excellence PU College, we believe that integrating technology with classroom teaching opens new possibilities for learning, inspires curiosity, and prepares students for the future.
ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಮತ್ತೊಂದು ಹೆಜ್ಜೆ!
ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಮಹತ್ವವನ್ನು ಅರಿತು, ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜು ಡಿಜಿಟಲ್ ತರಗತಿಯನ್ನು (Digital Classroom) ಉದ್ಘಾಟಿಸುವ ಮೂಲಕ ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಮಾನ್ಯ ಶಾಸಕರಾದ ಶ್ರೀ ಜಿ.ಟಿ. ದೇವೇಗೌಡರು ಡಿಜಿಟಲ್ ತರಗತಿಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಈ ನವೀನ ಉಪಕ್ರಮವನ್ನು ಶ್ಲಾಘಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.
ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಿಂದ ತರಗತಿಯ ಬೋಧನೆ ಹೆಚ್ಚು ಆಸಕ್ತಿದಾಯಕ, ಸಂವಾದಾತ್ಮಕ ಮತ್ತು ಪರಿಣಾಮಕಾರಿಯಾಗಲಿದ್ದು, ವಿದ್ಯಾರ್ಥಿಗಳಿಗೆ ಪಾಠಗಳ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಹಾಗೂ ಹೊಸ ಕಲಿಕಾ ಅನುಭವವನ್ನು ಪಡೆಯಲು ನೆರವಾಗಲಿದೆ.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಕ್ಷರಾದ ಡಾ. ಜಿ.ಆರ್. ಚಂದ್ರಶೇಖರ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಸರಳಾ ಚಂದ್ರಶೇಖರ್ ಉಪಸ್ಥಿತರಿದ್ದರು.
ಕಾವೇರಿ ಎಕ್ಸಲೆನ್ಸ್ ಪಿಯು ಕಾಲೇಜು ತಂತ್ರಜ್ಞಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಸಮನ್ವಯಗೊಳಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನ, ಕುತೂಹಲ ಮತ್ತು ನಾವೀನ್ಯತೆಯನ್ನು ಬೆಳೆಸುವ ಆಧುನಿಕ ಕಲಿಕಾ ವಾತಾವರಣವನ್ನು ನಿರ್ಮಿಸಲು ಸದಾ ಬದ್ಧವಾಗಿದೆ.

















